Current Date 31 Jul, 2026

'ಯಶ್' ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎನ್ನುವ ಭಯ ಆಗ ನನಗೆ ಕಾಡುತ್ತಿತ್ತು- ಶ್ರುತಿ ನಾಯ್ಡು....!

'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಒಂದು ಉದಾಹರಣೆಯನ್ನು ಶ್ರುತಿ ನಾಯ್ಡು ನೀಡಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಯಶ್‌ಗೆ ಈ ಅಪಾರವಾದ ಯಶಸ್ಸು ಏಕಾಏಕಿ ಸಿಕ್ಕಿಲ್ಲ. ಇದಕ್ಕೆ ಯಶ್ ಹಲವಾರು ಕಸರತ್ತು ಮಾಡಿದ್ದಾರೆ. ಬೆವರು ಸುರಿಸಿದ್ದಾರೆ. ಕಿರುತೆರೆಯಲ್ಲಿ ಚಿಕ್ಕ- ಚಿಕ್ಕ ಪಾತ್ರಗಳನ್ನು ಮಾಡುತ್ತಾ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾ, ಹಂತ ಹಂತವಾಗಿ ಯಶ್ ಮೇಲೆ ಬಂದಿದ್ದಾರೆ. ಆ ಪೈಕಿ ನಂದ ಗೋಕುಲ ಧಾರಾವಾಹಿ ಕೂಡ ಒಂದು. ಈ ಧಾರಾವಾಹಿಯಲ್ಲಿ ಯಶ್ ಜೊತೆ ಕಾಣಿಸಿಕೊಂಡಿದ್ದ ನಟಿ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ತಮ್ಮ ನೆನಪುಗಳನ್ನು ರ್ಯಾಪಿಡ್ ರಶ್ಮಿ ಅವರ ಜೊತೆ ಹಂಚಿಕೊಂಡಿದ್ದಾರೆ. ದೊಡ್ಡ ಸ್ಟಾರ್ ಆಗಬೇಕೆನ್ನುವ ಹೊಳಪು ಯಶ್ ಕಣ್ಣಲ್ಲಿ ಆಗಲೇ ಇತ್ತು ಎಂದು ಹೇಳಿದ್ದಾರೆ.